Top Health News -- ScienceDaily

Health Care

Beauty

Weight Loss

ಗರ್ಭಿಣಿಯಾಗಿದ್ದಾಗ ಹೆಚ್ಚಿನ ತೂಕ ಇದ್ದರೆ ಸಮಸ್ಯೆ ಗ್ಯಾರಂಟಿ



ಮಹಿಳೆಯರು ಹೆಚ್ಚಿನ ತೂಕ ಹೊಂದಿದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಕಂಡು ಬರುತ್ತದೆ ಅನ್ನೋದು ನಿಮಗೆ ಗೊತ್ತು. ಆದರೆ ಪ್ರೆಗ್ನೆಂಟ್‌ ಆಗುವಲ್ಲಿಯೂ ಹೆಚ್ಚಿನ ತೂಕ ಪರಿಣಾಮ ಬೀರುತ್ತದೆ ಅನ್ನೋದು ತಿಳಿದಿದೆಯೇ..? ಹೌದು ಹೆಚ್ಚಿನ ತೂಕ ಹೊಂದಿರುವವರಲ್ಲಿ ಗರ್ಭ ಧರಿಸುವ ಚಾನ್ಸಸ್‌ ಕಡಿಮೆ ಇರುತ್ತದೆ ಅನ್ನೋದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಇದರಿಂದ ಬೇರೆ ಏನೇನು ಸಮಸ್ಯೆ ಕಾಣಿಸಿಕೊಳ್ಳಲಿದೆ ಅನ್ನೋದು ತಿಳಿಯಿರಿ....

ಹೆಚ್ಚು ತೂಕ ಹೊಂದಿದರೆ ಗರ್ಭಧಾರಣೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಓವ್ಯುಲೇಶನ್‌ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಇದರಿಂದ ಇರ್‌ರೆಗ್ಯುಲರ್‌ ಪಿರಿಯಡ್ಸ್‌ ಕೂಡ ಉಂಟಾಗುತ್ತದೆ. 


ಕಡಿಮೆ ತೂಕದ ಮಹಿಳೆಯರಿಗಿಂತ ಬೊಜ್ಜು ಹೆಚ್ಚಿದ ಮಹಿಳೆಯರಲ್ಲಿ ಫರ್ಟಿಲಿಟಿ ಟ್ರೀಟ್‌ಮೆಂಟ್‌ ಪರಿಣಾಮ ಬೀರುವುದು ಕಡಿಮೆ. ಐವಿಎಫ್‌ ಟ್ರೀಟ್‌ಮೆಂಟ್‌ ಪರಿಣಾಮ ಬೀರಬೇಕಾದರೆ ಮಹಿಳೆ ಇಂತಿಷ್ಟು ಪ್ರಮಾಣದಲ್ಲಿ ತೂಕ ಕಳೆದುಕೊಳ್ಳಬೇಕು. 

ಹೆಚ್ಚಿನ ತೂಕ ಹೊಂದಿದರೆ ಗರ್ಭಪಾತದ ಸಮಸ್ಯೆ ಹೆಚ್ಚು ಇರುತ್ತದೆ. ತೂಕದ ಸಮಸ್ಯೆಯಿಂದಾಗಿ ಬೇಗನೆ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಗರ್ಭ ಧರಿಸಿದರೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. 

ಈ ಸಮಸ್ಯೆಯಿಂದ ಬಳಲುವ ಮಹಿಳೆಯರು ಪೊಲಿಸಿಸ್ಟಿಕ್‌ ಒವಾರಿಯನ್‌ ಸಿಂಡ್ರಮ್‌ ಸಮಸ್ಯೆಯಿಂದ ಬಳಲುತ್ತಾರೆ. 
ಅಷ್ಟೇ ಅಲ್ಲದೇ ಇದರಿಂದ ಜೀವನ ಶೈಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಒತ್ತಡ, ಡಯಾಬಿಟೀಸ್‌, ಹೆಚ್ಚಿನ ಕೊಲೆಸ್ಟ್ರಾಲ್‌ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. 

No comments:

Post a Comment